ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು ಭಾರತದಲ್ಲಿನ ಅರೆ-ನ್ಯಾಯಾಂಗ ಸಂಸ್ಥೆಯಾಗಿದ್ದು, ಇದು ಭಾರತೀಯ ಕಂಪನಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿರ್ಣಯಿಸುತ್ತದೆ. ಕಂಪನಿಗಳ ಕಾಯ್ದೆ ೨೦೧೩ರ ಅಡಿಯಲ್ಲಿ ಈ ನ್ಯಾಯಮಂಡಳಿಯನ್ನು ಸ್ಥಾಪಿಸಲಾಯಿತು ಮತ್ತು ಇದನ್ನು ೧ ಜೂನ್ ೨೦೧೬ ರಂದು ಭಾರತ ಸರ್ಕಾರವು ರಚಿಸಿತು. ಅಲ್ಲದೆ ಇದು ಕಂಪನಿಗಳ ದಿವಾಳಿತನ ಮತ್ತು ಅದರ ಅಂತ್ಯಕ್ಕೆ ಸಂಬಂಧಿಸಿದ ಕಾನೂನಿನ ಕುರಿತು ವಿ.ಬಾಲಕೃಷ್ಣ ಎರಾಡಿ ಸಮಿತಿಯ ಶಿಫಾರಸನ್ನು ಆಧರಿಸಿದೆ. ಕಂಪನಿಗಳ ಕಾಯಿದೆಯಡಿಯಲ್ಲಿರುವ ಮಧ್ಯಸ್ಥಿಕೆ, ರಾಜಿ, ಕಂಪನಿಗಳ ಪುನರ್ನಿರ್ಮಾಣಗಳು, ವ್ಯವಸ್ಥೆಗಳು ಮತ್ತು ಕಂಪನಿಗಳ ಮುಕ್ತಾಯಕ್ಕೆ ಸಂಬಂಧಿಸಿದ ಪ್ರಕ್ರಿಯೆಗಳು ಸೇರಿದಂತೆ ಉಳಿದ ಎಲ್ಲಾ ಪ್ರಕ್ರಿಯೆಗಳನ್ನು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು ವಿಲೇವಾರಿ ಮಾಡುತ್ತದೆ. ಎನ್‌ಸಿಎಲ್‌ಟಿ ಬೆಂಚ್‌ನ ಅಧ್ಯಕ್ಷತೆಯನ್ನು ವಹಿಸಿಕೊಳ್ಳುವವರು, ನಿವೃತ್ತ ಅಥವಾ ಹೈಕೋರ್ಟ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸಲಿರುವ ನ್ಯಾಯಾಂಗ ಸದಸ್ಯ ಮತ್ತು ಭಾರತೀಯ ಕಾರ್ಪೊರೇಟ್ ಕಾನೂನು ಸೇವೆಯಾದ ಐಸಿಎಲ್‌ಎಸ್ ಕೇಡರ್‌ನ ತಾಂತ್ರಿಕ ಸದಸ್ಯರಾಗಿರಬೇಕು. ಕಂಪೆನಿಗಳ ದಿವಾಳಿತನ ಮತ್ತು ದಿವಾಳಿತನ ಸಂಹಿತೆ, ೨೦೧೬ ರ ಅಡಿಯಲ್ಲಿ, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು ಸೀಮಿತ ಹೊಣೆಗಾರಿಕೆಯ ಪಾಲುದಾರಿಕೆಗಳ ದಿವಾಳಿತನ ಪರಿಹಾರ ಪ್ರಕ್ರಿಯೆಗಾಗಿ ತೀರ್ಪು ನೀಡುವ ಅಧಿಕಾರವಾಗಿದೆ. ನ್ಯಾಯಮಂಡಳಿಯು ಒಟ್ಟು ಹದಿನಾರು ಪೀಠಗಳನ್ನು ಹೊಂದಿದೆ: ಅದರಲ್ಲಿ ಆರು ನವದೆಹಲಿಯಲ್ಲಿದ್ದು(ಒಂದು ಪ್ರಧಾನ ಪೀಠ), ಅಹಮದಾಬಾದ್‌ನಲ್ಲಿ ಎರಡು, ಪ್ರಯಾಗರಾಜ್‌ನಲ್ಲಿ ಒಂದು ಮತ್ತು ಬೆಂಗಳೂರಿನಲ್ಲಿ ಒಂದು ಬೆಂಚ್‍ಗಳನ್ನು ಹೊಂದಿದೆ. ನಂತರ ಚಂಡೀಗಢದಲ್ಲಿ ಒಂದು, ಚೆನ್ನೈನಲ್ಲಿ ಎರಡು, ಕಟಕ್‌ನಲ್ಲಿ ಒಂದು, ಗುವಾಹಟಿಯಲ್ಲಿ ಒಂದು ಮತ್ತು ಹೈದರಾಬಾದ್‌ನಲ್ಲಿ ಮೂರು ಬೆಂಚ್‍ಗಳನ್ನು ಹೊಂದಿದೆ. ಅದರಲ್ಲಿ ಒಂದು ಅಮರಾವತಿಯಲ್ಲಿ, ಒಂದು ಜೈಪುರದಲ್ಲಿ, ಒಂದು ಕೊಚ್ಚಿಯಲ್ಲಿ, ಎರಡು ಕೋಲ್ಕತ್ತಾದಲ್ಲಿ ಮತ್ತು ಐದು ಮುಂಬೈನಲ್ಲಿದೆ. ಅಂತೆಯೇ ಇಂದೋರ್ ಮತ್ತು ಅಮರಾವತಿಯಲ್ಲಿ ತಲಾ ಒಂದರಂತೆ ಎರಡು ಹೊಸ ಬೆಂಚುಗಳನ್ನು ಸ್ಥಾಪಿಸಲು ಅನುಮೋದಿಸಲಾಗಿದೆ. ಅಮರಾವತಿಯ ಬೆಂಚನ್ನು ಹೊರತುಪಡಿಸಿ, ಉಳಿದ ಎಲ್ಲಾ ಬೆಂಚ್‍ಗಳನ್ನು ವಿಭಾಗೀಯ ಬೆಂಚ‍್‍ಗಳೆಂದು ಸೂಚಿಸಲಾಗಿದೆ. ಮಣಿಪುರ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿಯಾದ ರಾಮಲಿಂಗಂ ಸುಧಾಕರ್‌ ಅವರು, ೦೧-೧೧-೨೦೧೧ ರಿಂದ ನ್ಯಾಯಮಂಡಳಿಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು, ಕಂಪನಿಗಳ ಕಾಯಿದೆಯಡಿಯಲ್ಲಿ ಈ ನಡಾವಳಿಗಳನ್ನು ನಿರ್ಣಯಿಸುವ ಅಧಿಕಾರವನ್ನು ಹೊಂದಿದೆ: ಕಂಪನಿ ಕಾನೂನು ಮಂಡಳಿಯನ್ನು ಹಿಂದಿನ ಕಾಯಿದೆಯ ಅಡಿಯಲ್ಲಿ (ಕಂಪನಿಗಳ ಕಾಯಿದೆ ೧೯೫೬) ಪ್ರಾರಂಭಿಸಲಾಯಿತು; ಕೈಗಾರಿಕಾ ಮತ್ತು ಹಣಕಾಸು ಪುನರ್ನಿರ್ಮಾಣ ಮೇಲ್ಮನವಿಯ ಪ್ರಾಧಿಕಾರವು ತೀರ್ಮಾನವಾಗಬೇಕಾಗಿದೆ; ಮತ್ತು ಕಂಪನಿಯ ದಬ್ಬಾಳಿಕೆ ಮತ್ತು ದುರುಪಯೋಗದ ಹಕ್ಕುಗಳಿಗೆ ಸಂಬಂಧಿಸಿದಂತೆ, ಕಂಪನಿಗಳನ್ನು ಮುಚ್ಚುವುದು ಮತ್ತು ಎಲ್ಲಾ ಇತರ ಅಧಿಕಾರಗಳನ್ನು ಕಂಪನಿಗಳ ಕಾಯಿದೆಯಡಿ ಸೂಚಿಸಲಾಗಿದೆ. == ಪ್ರಸ್ತುತ ಸದಸ್ಯರ ಪಟ್ಟಿ == ಗೌರವಾನ್ವಿತ ಅಧ್ಯಕ್ಷರು ಮತ್ತು ಹಾಲಿ ಸದಸ್ಯರ ಪಟ್ಟಿ ಈ ಕೆಳಗಿನಂತಿದೆ == ಮೇಲ್ಮನವಿ == ನ್ಯಾಯಮಂಡಳಿಯ ನಿರ್ಧಾರಗಳನ್ನು ಪ್ರಶ್ನಿಸಿ ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಮಂಡಳಿಗೆ ಮೇಲ್ಮನವಿಯನ್ನು ಸಲ್ಲಿಸಬಹುದು. ಅಲ್ಲಿನ ನಿರ್ಧಾರಗಳನ್ನು, ಭಾರತದ ಭಾರತದ ಸರ್ವೋಚ್ಛ ನ್ಯಾಯಾಲಯಕ್ಕೆ ಕಾನೂನಿನ ಅಂಶಗಳ ಮೇಲೆ ಮೇಲ್ಮನವಿಯನ್ನು ಸಲ್ಲಿಸಬಹುದು. ಭಾರತದ ಸರ್ವೋಚ್ಛ ನ್ಯಾಯಾಲಯ, ದಿವಾಳಿತನ ಮತ್ತು ದಿವಾಳಿತನ ಸಂಹಿತೆಯನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ. == ಉಲ್ಲೇಖಗಳು == == ಬಾಹ್ಯಕೊಂಡಿಗಳು ==